Kannada Shayaris

ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ, 

ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ 

ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ, 

ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ..


*** 

ಜೀವನ ಎಲ್ಲರಿಗೂ ಸಿಗಲೇಬೇಕೆನ್ನುವುದು ಅವಶ್ಯಕವಲ್ಲ, 

ಸ್ನೇಹ ಎಲ್ಲರಿಗೂ ಸಿಗಬೇಕೆನ್ನುವುದು ಅವಶ್ಯಕವಲ್ಲ 

ಕೆಲವೊಂದು ವ್ಯಕ್ತಿಗಳು ನಮಗೆ ತುಂಬಾ ಕಾಡುತ್ತಿದ್ದರೂ, 

ನಾವು ಅವರಿಗೆ ನೆನಪಿಗೆ ಬರಬೇಕೆನ್ನುವುದು ಅವಶ್ಯಕವಲ್ಲ 


*** 

ಬದುಕಿನ ಒಂದು ವಿಚಿತ್ರ ನಿಯಮ.. 

ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ ನೀರಿಗೆ ಬೆಲೆ ಎಲ್ಲಿದೆ.. 

ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ… 


*** 

ಹೃದಯದ ಬಡಿತದಲ್ಲಿ ಯಾರದ್ದೋ ನೆನಪು.. 

ಉಸಿರಾಡುವ ಉಸಿರಿನಲ್ಲಿ ಯಾರದ್ದೋ ಮಾತು.. 

ಕಣ್ಣೀರಿನ ಹನಿಯಲ್ಲಿ ಯಾರದ್ದೋ ಸ್ಪರ್ಶ.. 

ಖಂಡಿತ ಅದು.. ಆಷಾಡದಲ್ಲಿನ ದೆವ್ವದ ಸ್ಪರ್ಷ!

Leave a Reply

Your email address will not be published. Required fields are marked *